ಡಿಸೆಂಬರ್ ೧೦ - ಡಿಸೆಂಬರ್ ತಿಂಗಳಿನ ಹತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೪೪ನೇ (ಅಧಿಕ ವರ್ಷದಲ್ಲಿ ೩೪೫ನೇ) ದಿನ. ಡಿಸೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೮೯೮ - ಪ್ಯಾರಿಸ್ ಒಪ್ಪಂದದ ಮೂಲಕ ಸ್ಪೇನ್-ಅಮೇರಿಕ ಯುದ್ಧ ಕೊನೆಗೊಂಡು ಕ್ಯೂಬಾ ಸ್ವತಂತ್ರ ರಾಷ್ಟ್ರವಾಯಿತು. ೧೯೦೧ - ಮೊದಲ ನೊಬೆಲ್ ಪ್ರಶಸ್ತಿಗಳನ್ನು ನೀಡಲಾಯಿತು. ೧೯೩೨ - ಥೈಲ್ಯಾಂಡ್ ಸಾಂವಿಧಾನಿಕ ಚಕ್ರಾಧಿಪತ್ಯವಾಯಿತು. ೧೯೩೬ - ಯುನೈಟೆಡ್ ಕಿಂಗ್‍ಡಮ್ನ ಚಕ್ರವರ್ತಿ ಎಂಟನೇ ಎಡ್ವರ್ಡ್ ತನ್ನ ಕೀರೀಟವನ್ನು ತ್ಯಜಿಸಿದ. ೧೯೮೩ - ಅರ್ಜೆಂಟೀನದಲ್ಲಿ ಗಣತಂತ್ರದ ಮರುಸ್ಥಾಪನೆ. == ಜನನ == ೧೭೫೦ - ಟಿಪ್ಪು ಸುಲ್ತಾನ್, ಮೈಸೂರು ರಾಜ್ಯದ ರಾಜ. ೧೮೦೪ - ಕಾರ್ಲ್ ಗೂಸ್ಟಾಫ಼್ ಯಾಕಾಪ್ ಜಕೋಬೀ, ಜರ್ಮನಿಯ ಪ್ರಸಿದ್ಧ ಗಣಿತ ಶಾಸ್ತ್ರಜ್ಞ ೧೮೭೮ - ರಾಜಾಜಿ, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮುಂದಾಳು, ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್. ೧೮೯೬ - ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಿ.ಕೆ.ವೆಂಕಟರಾಮಯ್ಯ ೧೯೦೨ - ಎಸ್. ನಿಜಲಿಂಗಪ್ಪ, ಕರ್ನಾಟಕದ ಮೊದಲ ಮುಖ್ಯಮಂತ್ರಿ ೧೯೨೨ - ಶಾಂತಾದೇವಿ ಮಾಳವಾಡ, ಖ್ಯಾತ ಬರಹಗಾರ್ತಿ == ಮರಣ == ೧೮೯೬ - ಆಲ್ಫ್ರೆಡ್ ನೊಬೆಲ್, ಸ್ವೀಡನ್ನ ವಿಜ್ಞಾನಿ ಮತ್ತು ನೊಬೆಲ್ ಪ್ರಶಸ್ತಿಯ ಸ್ಥಾಪಕ. ೧೯೩೮ - ಮುಸ್ತಫ ಕೆಮಾಲ್ ಅಟಾಟುರ್ಕ್, ಟರ್ಕಿ ಗಣರಾಜ್ಯದ ಸ್ಥಾಪಕ ಮತ್ತು ಅದರ ಮೊದಲ ರಾಷ್ಟ್ರಪತಿ. ೨೦೦೧ - ಅಶೋಕ್ ಕುಮಾರ್, ಬಾಲಿವುಡ್ ನಟ. ೨೦೦೬ - ಅಗಸ್ಟೊ ಪಿನೊಚೆ, ಚಿಲಿಯ ಸರ್ವಾಧಿಕಾರಿ. == ದಿನಾಚರಣೆಗಳು == ಸಂಯುಕ್ತ ರಾಷ್ಟ್ರಗಳು - ಮಾನವ ಹಕ್ಕುಗಳ ದಿನ. ಥೈಲ್ಯಾಂಡ್ - ಸಂವಿಧಾನ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ